ಬೆಂಗಳೂರು, ಏ 09 (DaijiworldNews/HR): ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕೈಯಲ್ಲಿ ಏನೂ ಇಲ್ಲ, ಹೀಗಾಗಿ ಬಿಜೆಪಿ ವಿರುದ್ದ ದೂರು ಕೊಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಎಮರ್ಜೆನ್ಸಿ ಕಾಲದಲ್ಲಿ ಜೈಲಿನಲ್ಲಿ ಇಟ್ಟಿದ್ದರು, ಜಾರ್ಜ್ ಫರ್ನಾಂಡಿಸ್, ವಾಜಪೇಯಿ ಸೇರಿದಂತೆ ದೇಶವನ್ನೇ ಜೈಲಿನಲ್ಲಿ ಇಟ್ಟಿದ್ದರು. ಅವರು ದೂರು ಕೊಡಲಿ, ಕಾನೂನು ಪ್ರಕಾರ ಕ್ರಮ ಆಗಲಿ ಎಂದರು.
ಇನ್ನು ಬೆಂಗಳೂರಿನ ಕೆಲವು ಶಾಲೆಗಳಿಗೆ ನಿನ್ನೆ ಹುಸಿ ಬಾಂಬ್ ಕರೆ ಮಾಡಿದ್ದಾರೆ. ಸೆಂಟ್ರಲ್ ಏಜೆನ್ಸಿ ಗಂಭೀರವಾಗಿ ತನಿಖೆ ಮಾಡುತ್ತಿದೆ. ಮುಳಬಾಗಿಲಿನಲ್ಲಿ ಶೋಭಾಯಾತ್ರೆ ಮಾಡುವಾಗ ಕರೆಂಟ್ ಹೋದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.