ವಡೋದರಾ,ಏ 09 (DaijiworldNews/MS): ಗುಜರಾತ್ನಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರಿಯಾಗಿರುವ XE ತಳಿ ಪತ್ತೆಯಾಗಿದೆ ಎಂದು ಎಂದು ಆರೋಗ್ಯ ಸಚಿವರ ಮೂಲಗಳು ಶನಿವಾರ ಖಚಿತಪಡಿಸಿವೆ.
ಮಾರ್ಚ್ 11 ರಂದು ವಡೋದರಾ ನಗರದ ಗೋತ್ರಿ ಪ್ರದೇಶದ 60 ವರ್ಷದ ವ್ಯಕ್ತಿಗೆ ಕೋವಿಡ್ ತಗುಲಿರುವುದು ಖಚಿತವಾಗಿದ್ದು, ಅದರ ನಂತರ ಅವರ ಮಾದರಿಯನ್ನು ಜೀನೋಮ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ಫಲಿತಾಂಶವು ಅವರಲ್ಲಿ XE ರೂಪಾಂತರ ತಳಿ ಪತ್ತೆಯಾಗಿರುವುದು ತೋರಿಸಿದೆ. ಈ ವ್ಯಕ್ತಿ ಅಂತರರಾಜ್ಯ ಪ್ರಯಾಣವನ್ನು ಮಾಡಿಲ್ಲ ಎಂದು ಇದೇ ವೇಳೆ ಮೂಲಗಳು ಸ್ಪಷ್ಟಪಡಿಸಿದೆ.
ಇನ್ನು ಗುಜರಾತ್ನ INSACOG ಪ್ರಯೋಗಾಲಯವೂ, ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ (GBRC), ವರದಿಯ ರೂಪಾಂತರವನ್ನು ದೃಢಪಡಿಸಿದೆ.
ಬುಧವಾರ ಮುಂಬೈನಲ್ಲಿ XE ಕೊರೊನಾ ತಳಿ ಪತ್ತೆಯಾಗಿದೆ ಎಂದು ಹೇಳಿದ್ದ ವರದಿಯನ್ನು ಕೇಂದ್ರ ಸರ್ಕಾರದ ಅಧಿಕಾರಿಗಳು ಅಲ್ಲಗಳೆದಿದ್ದಾರೆ. XE ತಳಿ ಪತ್ತೆಯಾಗಿರುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿತ್ತು. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ತಜ್ಞರು ಕರೋನವೈರಸ್ ಪ್ರಕರಣದ ಜೀನೋಮಿಕ್ ವಿಶ್ಲೇಷಣೆಯನ್ನು ಮುಂಬೈ ನಾಗರಿಕ ಅಧಿಕಾರಿಗಳು XE ರೂಪಾಂತರವೆಂದು ವರದಿ ಮಾಡಿದ್ದಾರೆ ಆದರೆ ವೈಜ್ಞಾನಿಕ ಪುರಾವೆಗಳು ಇದುವರೆಗೆ ಅದನ್ನು ಸೂಚಿಸುವುದಿಲ್ಲ ಎಂದು ಹೇಳಿತ್ತು.
ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಗಗನ್ದೀಪ್ ಕಾಂಗ್, ಹೊಸ ಎಕ್ಸ್ಇ ರೂಪಾಂತರವು ಆತಂಕಕಾರಿ ವಿಚಾರವಲ್ಲ ಏಕೆಂದರೆ ಇದು ಓಮಿಕ್ರಾನ್ನ ಇತರ ಉಪ-ವೇರಿಯಂಟ್ಗಳಿಗಿಂತ (ಬಿಎ.1 ಮತ್ತು ಬಿಎ.2) ಹೆಚ್ಚಿನ ತೀವ್ರತೆಯನ್ನು ಉಂಟುಮಾಡುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.