ಲಕ್ನೋ, ಏ 09 (DaijiworldNews/MS): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಟ್ವಿಟರ್ ( ಯುಪಿ ಸಿಎಂಒ) ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಶನಿವಾರ ನಸುಕಿನ ಜಾವ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಬಳಿಕ ಕೆಲವೇ ಗಂಟೆಗಳಲ್ಲಿ ಮತ್ತೆ ಖಾತೆಯನ್ನು ಮರು ಸ್ಥಾಪಿಸಲಾಗಿದೆ.
ಹೌ ಟೂ ಟರ್ನ್ ಯುವರ್ BAYC/MAYC ಅನಿಮೇಟೆಡ್ ಆನ್ ಟ್ವೀಟರ್ ಎಂಬ ಟ್ಯುಟೋರಿಯಲ್ ಪೋಸ್ಟ್ ಯುಪಿ ಸಿಎಂಒ ಖಾತೆಯಿಂದ ಟ್ವೀಟ್ ಆಗಿದ್ದು ಈ ಸಂದರ್ಭ ಖಾತೆ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಜೊತೆಗೆ ಹ್ಯಾಕರ್ಗಳು ಖಾತೆಯ ಪ್ರೊಫೈಲ್ ಚಿತ್ರವನ್ನು ಕೂಡ ಬದಲಾಯಿಸಿದ್ದಾರೆ.
ಯುಪಿ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ನ್ನು ಹ್ಯಾಕ್ ಮಾಡಿದವರು ಆ ಖಾತೆಯಿಂದ 100ಕ್ಕೂ ಅಧಿಕ ಟ್ವೀಟ್ ಮಾಡಿದ್ದರು. BAYC/MAYC ಮೊಬೈಲ್ ಗೇಮ್ಗೆ ಸಂಬಂಧಿಸಿದ ಟ್ವೀಟ್ಗಳನ್ನು ಹಾಕಿದ್ದರು. ಪ್ರೊಫೈಲ್ ಫೋಟೋವೂ ಕೂಡ ಈ ಗೇಮ್ನಲ್ಲಿ ಬರುವ ವಾನರನದ್ದೇ ಹಾಕಲಾಗಿತ್ತು.
ಹ್ಯಾಕ್ ಆಗಿರುವ ಕುರಿತು ಮುಖ್ಯಮಂತ್ರಿಗಳ ಕಚೇರಿಯ ಟ್ವೀಟರ್ ಖಾತೆಯ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಟ್ವೀಟರ್ ಖಾತೆಯನ್ನು ಮತ್ತೆ ಸುಸ್ಥಿತಿಗೆ ತರಲಾಗಿದ್ದು, ಹ್ಯಾಕರ್ಗಳು ಪೋಸ್ಟ್ ಮಾಡಿದ ಎಲ್ಲಾ ಟ್ವೀಟ್ಗಳನ್ನು ಅಳಿಸಲಾಗಿದೆ.