ಮೈಸೂರು, ಏ 08 (DaijiworldNews/SM): ಅರಗ ಜ್ಞಾನೇಂದ್ರ ಅವರು ಅಯೋಗ್ಯ ಗೃಹ ಸಚಿವರಾಗಿದ್ದು, ಆ ಸ್ಥಾನದಲ್ಲಿ ಮುಂದುವರೆಯಲು ಅಯೋಗ್ಯರಾಗಿದ್ದಾರೆ. ಅವರನ್ನು ಆ ಸ್ಥಾನದಿಂದ ತೆರವುಗೊಳಿಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಯುವಕನ ಕೊಲೆ ಪ್ರಕರಣಕ್ಕೆ ಗೃಹ ಸಚಿವರು ಪ್ರಚೋದನೆ ಮಾಡಿದ್ದಾರೆ. ಉರ್ದು ಬರಲಿಲ್ಲ ಅನ್ನೋ ಕಾರಣಕ್ಕೆ ಕೊಲೆಯಾಗಿದೆ ಅಂತಾ ಅವರೇ ಹೇಳಿದರು. ಬಳಿಕ ಬೈಕ್ ಡಿಕ್ಕಿಯಾಗಿ ಕೊಲೆ ನಡೆದಿದೆ ಎಂದಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲದೆ ಹೇಳಿಕೆ ನೀಡುವ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದು, ತಕ್ಷಣ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆ ಇದೆ, ಗುಪ್ತಚರ ಇಲಾಖೆ ಇದೆ. ಮಾಹಿತಿ ಇಲ್ಲದೆ ಗೃಹ ಸಚಿವರು ಹೇಗೆ ಮಾತನಾಡಿದರು?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.