ಮಧ್ಯಪ್ರದೇಶ, ಏ 08 (DaijiworldNews/MS): ಆರೋಪಿಗಳಾಗಿದ್ದ ಪತ್ರಕರ್ತ, ಯೂಟ್ಯೂಬರ್ ಸೇರಿದಂತೆ ಪುರುಷರ ತಂಡವುವನ್ನು ಪೊಲೀಸ್ ಠಾಣೆಯೊಳಗೆ ಕೇವಲ ಒಳ ಉಡುಪಿನಲ್ಲಿ ನಿಲ್ಲಿಸಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಇಲಾಖೆ ಅಮಾನತು ಮಾಡಲಾಗಿದೆ.
ಈ ಪೋಟೋ ವೈರಲ್ ಆಗಿದ್ದು ಪತ್ರಕರ್ತ ಮತ್ತು ಯೂಟ್ಯೂಬರ್ ಸೇರಿದಂತೆ ಪುರುಷರು ಪೊಲೀಸ್ ಠಾಣೆಯೊಳಗೆ ಒಳ ಉಡುಪಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು, ಪೊಲೀಸ್ ಠಾಣಾಧಿಕಾರಿ ಕೊತ್ವಾಲಿ ಸಿಧಿ ಮತ್ತು ಸಬ್ ಇನ್ಸ್ಪೆಕ್ಟರ್ ಅವರಲ್ಲಿ ಸ್ಪಷ್ಟನೆ ಕೇಳಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್ಎಚ್ಒ ಮನೋಜ್ ಸೋನಿ ಅವರು ತಮ್ಮ ಬಟ್ಟೆಗಳನ್ನು ಬಳಸಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನಾವು ಅವರನ್ನು ಈ ರೀತಿ ಜೈಲಿನಲ್ಲಿ ಇರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದರು. ಈ ಕೃತ್ಯಕ್ಕೆ ಆಘಾತಕಾರಿ ಸಮರ್ಥನೆ ನೀಡಿದ ನಂತರ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಮಧ್ಯಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿಈ ಘಟನೆ ನಡೆದಿದ್ದು, ಬಿಜೆಪಿ ವಿರೋಧಿ ವಿಷಯವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಯೂಟ್ಯೂಬರ್ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಪತ್ರಕರ್ತ ಸೇರಿದಂತೆ 8 ಮಂದಿಯನ್ನು ಪೊಲೀಸರು ವಿವಸ್ತ್ರಗೊಳಿಸಿದ್ದರು.
"ಲಾಕಪ್ನಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಮುರಿದು ಹೋಯಿತು!ಒಂದೋ ಸರ್ಕಾರದ ಮಡಿಲಲ್ಲಿ ಕುಳಿತು ಹಾಡಿ ಹೊಗಳಬೇಕು, ಇಲ್ಲವೇ ಜೈಲಿಗೆ ಹೋಗಬೇಕು.‘ನವ ಭಾರತ’ ಸರ್ಕಾರ ಸತ್ಯಕ್ಕೆ ಹೆದರುತ್ತಿದೆ!" ಎಂದು ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರ ಹಾಕಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಟೋ ಮತ್ತು ವಿಡಿಯೋ ಘಟನೆಯು ಏಪ್ರಿಲ್ 2 ರಂದು ನಡೆದಿದೆ ಎಂದು ತಿಳಿದುಬಂದಿದೆ.