ಕೊಡಗು, ಏ 08 (DaijiworldNews/HR): ಸಿದ್ದರಾಮಯ್ಯ ಸಿಎಂ ಆಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ವಿಪಕ್ಷ ನಾಯಕರಿಗೆ ಇದೀಗ ನಿವೃತ್ತಿಯ ಅಗತ್ಯವಿದೆ. ಸಿದ್ದರಾಮಯ್ಯನವರು ನಿವೃತ್ತಿ ಆಗುವುದು ಬಹಳ ಒಳ್ಳೆಯದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಅಲ್ ಖೈದಾ ಮುಖ್ಯಸ್ಥ ಮಂಡ್ಯ ವಿದ್ಯಾರ್ಥಿನಿ ಮುಸ್ಕಾನ್ ಹೊಗಳಿದ ವಿಡಿಯೋ ವಿಚಾರಕ್ಕೆ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಉಮೇಶ್ ಕತ್ತಿ, ಸಿದ್ದರಾಮಯ್ಯ ಸಿಎಂ ಆಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ವಿಪಕ್ಷ ನಾಯಕರಿಗೆ ಇದೀಗ ನಿವೃತ್ತಿಯ ಅಗತ್ಯವಿದೆ. ಸಿದ್ದರಾಮಯ್ಯನವರು ನಿವೃತ್ತಿ ಆಗುವುದು ಬಹಳ ಒಳ್ಳೆಯದು ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಮಧ್ಯಪ್ರವೇಶದ ಅಗತ್ಯವಿಲ್ಲ. ಸರ್ಕಾರ ಮಧ್ಯಪ್ರವೇಶಿಸುವ ಅಗತ್ಯ ಇನ್ನೂ ಬಂದಿಲ್ಲ ಎಂದು ಹೇಳಿದ್ದಾರೆ.