ಉತ್ತರ ಪ್ರದೇಶ, ಏ 08 (DaijiworldNews/HR): ಮದುವೆ ಹೆಸರಲ್ಲಿ ಬರೋಬ್ಬರಿ 200 ಹುಡುಗಿಯರನ್ನು ನಂಬಿಸಿ, ಅವರನ್ನು ಮದುವೆ ಆಗಿ, ಸಂಸಾರ ಮಾಡಿ, ಆಮೇಲೆ ಎಸ್ಕೇಪ್ ಆಗ್ತಿದ್ದ ಯುವಕ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಗಾಜಿಯಾಬಾದ್ನ ನಿವಾಸಿ ತರುಣ್ ಕುಮಾರ್ ಎಂದು ಗುರುತಿಸಲಾಗಿದೆ.
ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಮಹಿಳೆಯರನ್ನು ಸಂಪರ್ಕಿಸಿ, ಅವರಿಗೆ ಸುಳ್ಳು ಹೇಳಿ, ಮದುವೆ ಮಾಡಿಕೊಂಡು ಅವರಿಂದ ಲಕ್ಷಾಂತರ ರೂಪಾಯಿ ಹಣ ದೋಚಿ, ಕೊನೆಗೆ ಎಸ್ಕೇಪ್ ಆಗ್ತಿದ್ದವನನ್ನು ಇದೀಗ ಉತ್ತರ ಪ್ರದೇಶದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇನ್ನು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಮಹಿಳೆಯರನ್ನು ಮ್ಯಾಟ್ರಿಮೊನಿ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಂಡು ಮದುವೆಯಾಗುವುದಾಗಿ ಆಮಿಷ ಒಡ್ಡುತ್ತಿದ್ದ ಎನ್ನಲಾಗಿದೆ.