ನವದೆಹಲಿ, ಏ 08 (DaijiworldNews/HR): ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತನ್ನ ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ, ಯಥಾಸ್ಥಿತಿಯನ್ನು ಮುಂದುವರೆಸಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎರಡು ವರ್ಷಗಳ ನಂತರ, ಕೊರೊನಾದಿಂದ ಹೊರಬರುತ್ತಿದ್ದಂತೆ, ಜಾಗತಿಕ ಆರ್ಥಿಕತೆಯು ಫೆಬ್ರವರಿ 24 ರಿಂದ ಯುರೋಪ್ನಲ್ಲಿ ಯುದ್ಧ ಆರಂಭದೊಂದಿಗೆ ಟೆಕ್ಟೋನಿಕ್ ಬದಲಾವಣೆಗಳನ್ನು ಕಂಡಿದೆ. ನಂತರ ನಿರ್ಬಂಧಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳನ್ನು ಹೆಚ್ಚಿಸುತ್ತಿದೆ ಎಂದರು.
ಇನ್ನು ಆರ್ಬಿಐ ಸತತ 11 ನೇ ಬಾರಿಗೆ ರೆಪೊ ದರವನ್ನು 4% ಕ್ಕೆ ಬದಲಾಯಿಸದೆ ಇರಿಸಿದ್ದು, ಆರ್ಬಿಐ 2022-23 ರ ತನ್ನ ಮೊದಲ ಹಣಕಾಸು ನೀತಿಯಲ್ಲಿ, ರೆಪೊ ದರ ಮತ್ತು ರಿವರ್ಸ್ ರೆಪೊ ದರವನ್ನು ಕ್ರಮವಾಗಿ 4% ಮತ್ತು 3.5% ನಲ್ಲಿ ಬದಲಾಯಿಸದೆ ಇರಿಸಿದೆ.
ರೆಪೊ ದರ ಅಥವಾ ಅಲ್ಪಾವಧಿಯ ಸಾಲದ ದರವನ್ನು ಮೇ 22, 2020 ರಂದು ಕೊನೆಯ ಬಾರಿಗೆ ಕಡಿತಗೊಳಿಸಲಾಗಿದ್ದು, ಅಂದಿನಿಂದ ದರವು ಕನಿಷ್ಠ ಶೇಕಡಾ 4 ರಷ್ಟಿದೆ.