ಬೆಂಗಳೂರು, ಏ 08 (DaijiworldNews/MS): ನಾನು ಯಾವುದೇ ರೀತಿಯ ಕೋಮು ಭಾವನೆ ಕದಡುವ ಹೇಳಿಕೆ ನೀಡಿಲ್ಲ, ಸತ್ಯ ಹೇಳಿದರೆ ಕೋಮು ಭಾವನೆ ಕದಡುತ್ತದೆಯೋ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಮೃತ ಚಂದ್ರು ತಾಯಿಯ ಹೇಳಿಕೆಯನ್ನ ಆಧರಿಸಿ ಮಾತನಾಡಿದ್ದೇನೆ ಭಾಷೆಯೂ ಒಂದು ನೆಪವಾಗಿದೆ. ಇದರಲ್ಲಿ ಕೋಮು ಕದಡುವ ವಿಚಾರ ಎಲ್ಲಿದೆ. ಆದರೆ ಇಲ್ಲಿ ಹತ್ಯೆ ಮಾಡುವ ಮಾನಸಿಕ ಸ್ಥಿತಿ ಯಾಕಿದೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ದ ಕಿಡಿಕಾರಿದ ಅವರು, ಸ್ವತಃ ಅಲ್ ಖೈದಾ ಉಗ್ರ ಆಲ್ ಜವಾಹರಿ ಮಾತಾಡಿರೋ ವಿಡಿಯೋ ಇದೆ. ಅದನ್ನ ಮೊದಲು ಅವರು ಶಾಂತವಾಗಿ ನೋಡಬೇಕು. ಸಿದ್ದರಾಮಯ್ಯ ಹೇಳಿಕೆ ಗಮನಿಸಿದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆಗಿದ್ರು ಎಂದು ಹೇಳೋಕೆ ಗೌರವ ಸಿಗಲ್ಲ. ಅವರು ಕಾಲ ಕಾಲಕ್ಕೆ ಸತ್ಯ ಹೇಳುವ ತಂಡವನ್ನ ಇಟ್ಟುಕೊಳ್ಳಬೇಕು. ಇಲ್ಲವಾದರೆ ಅರುಳೋ ಮರುಳೋ ಅನ್ನೋ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಜನ ಮಾತಾಡಿಕೊಳ್ತಾರೆ ಎಂದು ವಾಗ್ದಾಳಿ ನಡೆಸಿದರು.