ಮೈಸೂರು, ಏ 07 (DaijiworldNews/HR): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ್ದು, ನಟ ಪುನೀತ್ ರಾಜ್ಕುಮಾರ್ ಅವರ ಕನಸನ್ನ ಕುಟುಂಬಸ್ಥರು ನನಸು ಮಾಡಿದ್ದಾರೆ.
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದ ಬಳಿ ಶಾಲೆ ಆರಂಭಿಸುವ ಕನಸನ್ನ ನಟ ಪುನೀತ್ ರಾಜ್ಕುಮಾರ್ ಕಂಡಿದ್ದು, ಅದರಂತೆ ಅಪ್ಪು ಕನಸನ್ನ ಅವರ ಕುಟುಂಬಸ್ಥರು ನನಸು ಮಾಡಿದ್ದಾರೆ.
ಇನ್ನು ಶಕ್ತಿಧಾಮಕ್ಕೆ ಸರ್ಕಾರ 5 ಕೋಟಿ ರೂಪಾಯಿ ನೀಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಹೆಣ್ಣು ಮಕ್ಕಳ ಅಭಿವೃದ್ಧಿಗೆ ಬಜೆಟ್ನಲ್ಲಿ 40,900 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಶಕ್ತಿಧಾಮ 5 ಕೋಟಿ ರೂಪಾಯಿ ನೀಡಲಾಗುವುದು ಎಂದಿದ್ದಾರೆ.