ಮೈಸೂರು, ಏ 07 (DaijiworldNews/HR): ಅಲ್ ಖೈದಾ ನಾಯಕನ ವಿಡಿಯೋ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ’ ಎಂಬ ಸಿದ್ದರಾಮಯ್ಯ ಹೇಳಿದ್ದು, ಅವರ ಹೇಳಿಕೆಯಲ್ಲಿ ಲಾಜಿಕ್ ಇಲ್ಲ, ಅಲ್ ಖೈದಾ ನಾಯಕನ ವಿಡಿಯೋ ಬಂದರೆ ಸಿದ್ದರಾಮಯ್ಯ ಯಾಕೆ ಗಲಿಬಿಲಿಯಾಗುತ್ತಾರೆ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಮಂಡ್ಯದ ಮುಸ್ಕಾನ್ ಗೆ ಬೆಂಬಲ ಸೂಚಿಸಿರುವ ಅಲ್ ಖೈದಾ ನಾಯಕನ ವಿಡಿಯೋ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ಆಶ್ಚರ್ಯ ಏನಿದೆ? ಹಲವಾರು ವಿಚಾರಗಳನ್ನು ನೆಲದ ಕಾನೂನಿನ ವಿರುದ್ಧವಾಗಿ ಮಾಡಲಾಗಿದೆ. ಇದರ ಹಿಂದೆ ಕೆಲ ಶಕ್ತಿ ಇದ್ದು, ಇದು ನಿರಂತರವಾಗಿ ನಡೆಯುತ್ತಿದೆ. ಅದರ ಭಾಗವಾಗಿ ಅಲ ಖೈದಾ ವಿಡಿಯೋದಲ್ಲಿ ಅಭಿಪ್ರಾಯ ಸ್ಪಷ್ಟವಾಗಿ ಹೊರ ಬಂದಿದೆ ಎಂದರು.
ಇನ್ನು ನಾವು ವಿಡಿಯೋ ಕುರಿತು ತನಿಖೆ ನಡೆಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ ಖೈದಾ ನಾಯಕನ ವಿಡಿಯೋ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ಲಾಜಿಕ್ ಇಲ್ಲ, ಅಲ್ ಖೈದಾ ನಾಯಕನ ವಿಡಿಯೋ ಬಂದರೆ ಸಿದ್ದರಾಮಯ್ಯ ಯಾಕೆ ಗಲಿಬಿಲಿಯಾಗುತ್ತಾರೆ. ಇದು ನಾನು ಕೇಳುವಂತಹ ಪ್ರಶ್ನೆ ಎಂದಿದ್ದಾರೆ.