ಗುಜರಾತ್, ಏ 07 (DaijiworldNews/HR): ಕರ್ತವ್ಯ ನಿರತ ಪೊಲೀಸರ ಮೇಲೆ ಗುಜರಾತ್ ಎಎಪಿಯ ಯುವ ಘಟಕದ ನಾಯಕ ಯುವರಾಜ್ ಸಿನ್ಹ ಜಡೇಜಾ ಅವರು ಹಲ್ಲೆ ನಡೆಸಿ, ಬಳಿಕ ಕಾನ್ಸ್ಟೇಬಲ್ ನನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಘಟನೆ ನಡೆದಿದ್ದು, ಜಡೇಜಾ ಅವರನ್ನು ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ದೃಶ್ಯದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಗೆ ಗುದ್ದಿಗೊಂಡೇ ಸ್ವಲ್ಪ ದೂರು ಕಾರು ಚಲಾಯಿಸಿದ್ದು, ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿ ಇರುವುದನ್ನು ಕಾಣಬಹುದಾಗಿದೆ.
ಇನ್ನು ಜಡೇಜಾ ಕೆಲವು ಕರ್ತವ್ಯ ನಿರತ ಪೊಲೀಸರ ಮೇಲೆ ಮಧ್ಯೆ ವಾಗ್ವಾದ ನಡೆಸಿದ್ದು, ಜಡೇಜಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರು ಜಮಾಯಿಸಿದ ನಂತರ ಜಡೇಜಾ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಕಾನ್ಸ್ಟೇಬಲ್ ಒಬ್ಬರು ತಡೆಯಲು ಮುಂದಾದಾಗ ಕಾರನ್ನು ನಿಲ್ಲಿಸಲಿಲ್ಲ ಎನ್ನಲಾಗಿದೆ.
ವೇಗವಾಗಿ ಬಂದ ಕಾರಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಕಾನ್ಸ್ಟೆಬಲ್ ಲಕ್ಷ್ಮಣ ವಾಸವ ಬಾನೆಟ್ ಮೇಲೆ ಹಾರಿದ್ದಾರೆ ಎಂದು ತಿಳಿದು ಬಂದಿದ್ದು, ಈ ಘಟನೆಯು ಜಡೇಜಾ ಅವರ ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ದಾಖಲಾಗಿದೆ.