ಶ್ರೀಕಾಕುಲಂ, ಏ 07 (DaijiworldNews/MS): ಆಭರಣ ದೋಚಿದ ಕಿಂಡಿಯಲ್ಲಿ ಕಳ್ಳನೊರ್ವ ಸಿಕ್ಕಿಬಿದ್ದು ಪೀಕಲಾಟ ಅನುಭವಿಸಿದ ಸ್ವಾರಸ್ಯಕರ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶ್ರೀಕಾಕುಲಂನ ಜಾಮಿ ಯೆಲ್ಲಮ್ಮ ದೇಗುಲದಲ್ಲಿ ಕಳ್ಳತನ ಮಾಡಲೆಂದು ಪಾಪಾ ರಾವ್ (30) ಹೆಸರಿನ ಕಳ್ಳ ಪ್ರಯತ್ನಿಸಿದ್ದಾನೆ. ಇದಕ್ಕಾಗಿ ದೇಗುಲದ ಹಿಂಭಾಗದಲ್ಲಿದ್ದ ಕಿಂಡಿ ಒಡೆದು ಅದರ ಮೂಲಕ ಆತ ದೇಗುಲದೊಳಗೆ ನುಗ್ಗಿದ್ದಾನೆ. ಆದರೆ ದೇವಸ್ಥಾನದಿಂದ ಆಭರಣ ದೋಚಿದ ಬಳಿಕ ಗೆ ಪರಾರಿಯಾಗಲು ಯತ್ನಿಸಿದ ಆರೋಪಿ ಕೊನೆಗೆ ಕಿಂಡಿಯಲ್ಲಿ ಹೊರಬರಲಾಗದೆ ಸಿಲುಕಿಕೊಂಡಿದ್ದಾರೆ.
ನಂತರ ಕೂಗಿ ಸಹಾಯ ಕೇಳಲಾರಂಭಿಸಿದ್ದಾನೆ. ಕೂಗನ್ನು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದು, ಆತನನ್ನು ರಕ್ಷಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.