ನವದೆಹಲಿ, ಏ 07 (DaijiworldNews/MS): ಚೀನಾದ ಪ್ರಾಯೋಜಿತ ಹ್ಯಾಕರ್ಗಳು ಇತ್ತೀಚಿನ ತಿಂಗಳುಗಳಲ್ಲಿ ಲಡಾಖ್ ಬಳಿಯ ಭಾರತೀಯ ವಿದ್ಯುತ್ ವಿತರಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಖಾಸಗಿ ಗುಪ್ತಚರ ಸಂಸ್ಥೆ ರೆಕಾರ್ಡೆಡ್ ಫ್ಯೂಚರ್ ವರದಿಯು ಬುಧವಾರ ಹೇಳಿದೆ.
ಇತ್ತೀಚಿನ ಕೆಲವು ತಿಂಗಳುಗಳಲ್ಲಿ, ಈ ಆಯಾ ರಾಜ್ಯಗಳಲ್ಲಿ ಗ್ರಿಡ್ ನಿಯಂತ್ರಣ ಮತ್ತು ವಿದ್ಯುಚ್ಛಕ್ತಿ ರವಾನೆಗಾಗಿ ನೈಜ-ಸಮಯದ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಹೊಂದಿರುವ ಕನಿಷ್ಠ ಏಳು ಭಾರತೀಯ ಸ್ಟೇಟ್ ಲೋಡ್ ಡೆಸ್ಪಾಚ್ ಸೆಂಟರ್ (ಎಸ್ಎಲ್ಡಿಸಿ) ಗಳನ್ನು ಗುರಿಯಾಗಿಸಿಕೊಂಡು ಸಂಭವನೀಯ ನೆಟ್ವರ್ಕ್ ಒಳನುಗ್ಗುವಿಕೆಯನ್ನು ನಾವು ಗಮನಿಸಿದ್ದೇವೆ.
ಈ ಗುರಿಯು ಭೌಗೋಳಿಕವಾಗಿ ಕೇಂದ್ರೀಕೃತವಾಗಿದೆ, ಗುರುತಿಸಲಾದ ಎಸ್ಎಲ್ಡಿಸಿಗಳು ಉತ್ತರ ಭಾರತದಲ್ಲಿ ನೆಲೆಯಾಗಿದ್ದು ಲಡಾಖ್ನಲ್ಲಿ ವಿವಾದಿತ ಭಾರತ-ಚೀನಾ ಗಡಿಯ ಸಮೀಪದಲ್ಲಿದೆ, ವರದಿಯನ್ನು ಪ್ರಕಟಿಸುವ ಮೊದಲು ಅವರು ತಮ್ಮ ಸಂಶೋಧನೆಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ದಾರೆ ಎಂದು ರೆಕಾರ್ಡೆಡ್ ಫ್ಯೂಚರ್ ಹೇಳಿದೆ.
ಗುಪ್ತಚರ ಸಂಸ್ಥೆಯ ಪ್ರಕಾರ, ಚೀನಾ ಪ್ರಾಯೋಜಿತ ಹ್ಯಾಕರ್ ಗಳು ಮೂಲಸೌಕರ್ಯ ವ್ಯವಸ್ಥೆಗಳ ಸುತ್ತಲಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರೆಕಾರ್ಡೆಡ್ ಫ್ಯೂಚರ್ ಹೇಳಿಕೊಂಡಿದೆ.
ಹ್ಯಾಕರ್ ಗಳಿಗೆ , ಭಾರತೀಯ ಪವರ್ ಗ್ರಿಡ್ ಸೀಮಿತ ಆರ್ಥಿಕ ಬೇಹುಗಾರಿಕೆ ಅಥವಾ ಸಾಂಪ್ರದಾಯಿಕ ಗುಪ್ತಚರ-ಸಂಗ್ರಹಿಸುವ ಅವಕಾಶಗಳನ್ನು ನೀಡುತ್ತದೆ. ಈ ಗುರಿಯು ನಿರ್ಣಾಯಕ ಮೂಲಸೌಕರ್ಯ ವ್ಯವಸ್ಥೆಗಳ ಸುತ್ತಲಿನ ಮಾಹಿತಿ ಸಂಗ್ರಹಣೆಯನ್ನು ಸಕ್ರಿಯಗೊಳಿಸುವ ಉದ್ದೇಶವನ್ನು ಹೊಂದಿದೆ ಅಥವಾ ಚೀನಾದ ಭವಿಷ್ಯದ ಚಟುವಟಿಕೆಗಾಗಿ ಮಾಹಿತಿ ಸಂಗ್ರಹಿಸುತ್ತಿರಬಹುದು ಎಂದು ನಾವು ನಂಬುತ್ತೇವೆ, ”ಎಂದು ಗುಪ್ತಚರ ಸಂಸ್ಥೆ ಎಚ್ಚರಿಸಿದೆ.