ಮುಂಬೈ, ಏ 07 (DaijiworldNews/MS): ಕೊರೊನಾ ವೈರಸ್ನ ಇತರೆ ರೂಪಾಂತರಿಗಳಿಗಿಂತ ಅತ್ಯಂತ ವೇಗವಾಗಿ ಪ್ರಸರಣವಾಗಬಲ್ಲ ನೂತನ ‘ಎಕ್ಸ್.ಇ’ ತಳಿ ಸೋಂಕಿನ ಭಾರತಕ್ಕೆ ಕಾಲಿಟ್ಟಿದೆ ಎಂಬ ಆತಂಕ ಪ್ರಾರಂಭವಾಗಿದೆ.
ನೂತನ ‘ಎಕ್ಸ್.ಇ’ ತಳಿ ಸೋಂಕಿನ ಮೊದಲ ಪ್ರಕರಣ ನಗರದಲ್ಲಿ ಪತ್ತೆಯಾಗಿದೆ ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾ ದಿಂದ ವಾಪಸಾಗಿದ್ದ ಮಹಿಳೆಯೊಬ್ಬ ರಲ್ಲಿ ಈ ‘ಎಕ್ಸ್.ಇ’ ತಳಿ ಸೋಂಕು ಪತ್ತೆಯಾಗಿದೆ. ಅವರಲ್ಲಿ ಯಾವುದೇ ರೋಗಲಕ್ಷಣ ಇಲ್ಲ. ಅವರು ಗುಣಮುಖ ರಾಗಿದ್ದಾರೆ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸದ್ಯ ದೊರಕಿರುವ ಪುರಾವೆಗಳ ಪ್ರಕಾರ ಇದು ಎಕ್ಸ್.ಇ’ ತಳಿ ಪ್ರಕರಣ ಎಂದು ಇನ್ನೂ ದೃಢವಾಗಿಲ್ಲ 'ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂನ ತಜ್ಞರು FastQ ಮಾದರಿಗಳನ್ನು ಪರಿಶೀಲಿಸಿದ್ದಾರೆ. ಮುಂಬೈ ಮಹಿಳೆಗೆ ಸೋಂಕು ತಗುಲಿರುವ ಈ ರೂಪಾಂತರದ ಜೀನೋಮಿಕ್ ರಚನೆಯು ಎಕ್ಸ್.ಇ ರೂಪಾಂತರದ ಜೀನೋಮಿಕ್ ರಚನೆಯಾಗಿದೆ ಎಂದು ಶಂಕಿಸಿದ್ದಾರೆ.