ಬೆಂಗಳೂರು, ಏ 06 (DaijiworldNews/HR): ಕರ್ನಾಟಕದಲ್ಲಿ ಈ ವರ್ಷದಿಂದಲೇ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ವರ್ಷವೇ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 3 ಸಾವಿರ ಮಾದರಿ ಶಾಲೆಗಳನ್ನು ಮಾರ್ಪಾಟು ಮಾಡಿ ತರಗತಿ ಆರಂಭಿಸುವ ಆಲೋಚನೆ ಇದೆ. ಮಾದರಿ ಶಾಲೆಗಳು ಎಂದರೆ ವಿಶೇಷತೆ ಇರುವುದಿಲ್ಲ. ಇರುವಂತಹ ಸವಲತ್ತುಗಳನ್ನು ಬಳಸಿಕೊಳ್ಳಲಾಗುವುದು ಎಂದರು.
ಇನ್ನು ಶಾಲೆಗಳಲ್ಲಿ ತರಗತಿಗಳು ಇರುವಷ್ಟು ಕೊಠಡಿ ಹಾಗೂ ಶಿಕ್ಷಕರನ್ನು ಒದಗಿಸಲಾಗುವುದು. ಇಂಗ್ಲಿಷ್ ಕಲಿಕೆ ಬಗ್ಗೆ ಪ್ರತ್ಯೇಕ ತರಗತಿ ಇರಲಿದೆ. ಸ್ಪೋಕನ್ ಇಂಗಿಷ್ ಕಲಿಕೆಗಾಗಿಯೇ ವಿಶೇಷ ಶಿಕ್ಷಕರು ಇರಲಿದ್ದಾರೆ ಎಂದು ತಿಳಿಸಿದ್ದಾರೆ.