ಬೆಂಗಳೂರು, ಏ. 04 (DaijiworldNews/SM): ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಮೀರ್ ರಾಜ್ಯಕ್ಕೆ ಕಂಟಕ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವರಿಗೆ ರಾಜ್ಯವನ್ನು ಅಭಿವೃದ್ಧಿಪಡಿಸಲು ಆಸಕ್ತಿ ಇಲ್ಲ. ಮುಸಲ್ಮಾನರನ್ನು ಹಾಳು ಮಾಡಲು ಇವರು ಇರುವವರು. ಹಿಜಾಬ್ ವಿವಾದ ಆರಂಭದಲ್ಲೇ ಇವರಿಗೆ ನಿಲ್ಲಿಸಬಹುದಿತ್ತು. ವಿದ್ಯಾರ್ಥಿಗಳಿಗೆ ಆರಂಭದಲ್ಲೇ ಇವರು ಬುದ್ಧಿ ಹೇಳಬೇಕಿತ್ತು. ಆರಂಭದಲ್ಲೇ ಮಾತುಕತೆ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬಂದ್ ಸಂದರ್ಭದಲ್ಲೂ ಸಹಕಾರ ನೀಡುವಂತೆ ಈ ನಾಯಕರೇ ಹೇಳಿದ್ದರು. ಇವರಿಗೆ ಸಂವಿಧಾನ, ಕೋರ್ಟ್ ಬಗ್ಗೆ ಗೌರವವಿಲ್ಲ. ಮುಸಲ್ಮಾನರಲ್ಲಿ ಗೊಂದಲ ಹುಟ್ಟಿಸುವುದು ಇವರೇ ನಾಲ್ವರು ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.