ಉತ್ತರಾಖಂಡ, ಏ 05 (DaijiworldNews/DB): ಉತ್ತರಾಖಂಡ್ ನ ವೃದ್ಧೆಯೊಬ್ಬರು 50 ಲಕ್ಷ ರೂ. ಮೌಲ್ಯದ ಆಸ್ತಿ ಮತ್ತು ಸುಮಾರು 10 ಪವನ ಬಂಗಾರ ಸೇರಿ ತಮ್ಮ ಸಂಪೂರ್ಣ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬರೆದು ಕೊಟ್ಟಿದ್ದಾರೆ.
ಇಲ್ಲಿನ ನೆಹರು ಕಾಲೋನಿಯ ದಲನ್ವಾಲಾ ನಿವಾಸಿಯಾಗಿರುವ 78 ವರ್ಷದ ವೃದ್ಧೆ ಪುಷ್ಪಾ ಮುಂಜಿಯಾಲ್ ಆಸ್ತಿಯನ್ನು ರಾಹುಲ್ ಹೆಸರಿಗೆ ಬರೆದುಕೊಟ್ಟವರು. ವೃದ್ದೆಯು ಡೆಹ್ರಾಡೂನ್ನ ಜಿಲ್ಲಾ ನ್ಯಾಯಾಲಯಕ್ಕೆ ವಿಲ್ ಸಲ್ಲಿಸಿ ತಮ್ಮ ಆಸ್ತಿಯ ವಾರಸುದಾರರನ್ನಾಗಿ ರಾಹುಲ್ ಗಾಂಧಿಯವರನ್ನು ಅಧಿಕೃತಗೊಳಿಸುವಂತೆ ಕೇಳಿಕೊಂಡಿದ್ದಾರೆ. ದೇಶ ಸ್ವಾತಂತ್ರ್ಯ ಗಳಿಸಿದಾಗಿನಿಂದಲೇ ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ. ರಾಹುಲ್ ಆಲೋಚನೆಯಿಂದ ನನಗೆ ತೃಪ್ತಿ ತಂದಿದ್ದು, ದೇಶಕ್ಕೆ ಅವರಂತಹವರ ಅವಶ್ಯಕತೆ ಮನಗಂಡು ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ನ್ಯಾಯಾಲಯಕ್ಕೆ ತಮ್ಮ ಆಸ್ತಿಯ ಸಂಪೂರ್ಣ ವಿವರವನ್ನು ನೀಡಿದ್ದಾರೆ. ವೃದ್ದೆ ಬಳಿ ಒಟ್ಟು 50 ಲಕ್ಷ ರೂ. ಮೌಲ್ಯದ ಆಸ್ತಿ ಮತ್ತು ಸುಮಾರು 10 ಪವನ ಬಂಗಾರವಿದ್ದು, ಪ್ರಸ್ತುತ ಎಲ್ಲವನ್ನೂ ರಾಹುಲ್ ಗಾಂಧಿ ಹೆಸರಿಗೆ ಬರೆಸಿದ್ದಾರೆ. ಅಲ್ಲದೆ, ತಾವು ಬರೆಸಿದ ವಿಲ್ ನ ದಾಖಲೆಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹಸ್ತಾಂತರಿಸಿದ್ದಾರೆ.