ನವದೆಹಲಿ, ಏ 05 (DaijiworldNews/HR): ಬಿಜೆಪಿಯು ವಿರೋಧ ಪಕ್ಷಗಳನ್ನು ಗುರಿಯಾಗಿಸಲು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷ ಮತ್ತು ನಾಯಕರ ಒಡೆಯುವ ಅಜೆಂಡಾ ಈಗ ರಾಜ್ಯಗಳಲ್ಲಿ ರಾಜಕೀಯ ಚರ್ಚೆಯ ಸಾಮಾನ್ಯ ವಿಚಾರವಾಗಿದ್ದು, ಇತಿಹಾಸವನ್ನು ಮಾತ್ರವಲ್ಲ ಸಮಕಾಲೀನ ಸತ್ಯಗಳನ್ನು ತಿರುಚಲಾಗುತ್ತಿದೆ ಎಂದರು.
ಇನ್ನು ಶತಮಾನಗಳಿಂದ ನಮ್ಮ ವೈವಿಧ್ಯಮಯ ಸಮಾಜವನ್ನು ಉಳಿಸಿ ಮತ್ತು ಶ್ರೀಮಂತಗೊಳಿಸಿದ ಸೌಹಾರ್ದತೆ ಮತ್ತು ಸಾಮರಸ್ಯದ ಬಂಧಗಳನ್ನು ಹಾನಿಗೊಳಿಸಲು ನಾವು ಅವರಿಗೆ ಅವಕಾಶ ನೀಡಬಾರದು ಎಂದಿದ್ದಾರೆ.