ಬೆಂಗಳೂರು, ಏ 05 (DaijiworldNews/DB): ದೇಶದ ಕಾನೂನು ಎಲ್ಲರಿಗೂ ಒಂದೇ. ಸುಪ್ರೀಮ ಕೋರ್ಟ್ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಆಜಾನ್ ಗದ್ದಲದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಎಲ್ಲರಿಗೂ ಅವರವರ ಧರ್ಮವೇ ಶ್ರೇಷ್ಠ. ಪ್ರಾರ್ಥನೆ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ದಿನಕ್ಕೆ ಐದು ಬಾರಿ ಮೈಕ್ ನಲ್ಲಿ ಕೂಗಿದರೆ ಸನಿಹದ ಮನೆಗಳಲ್ಲಿ ವಾಸಿಸುವವರಿಗೆ ತೊಂದರೆ ಉಂಟಾಗುತ್ತದೆ. ಕುರಾನ್ ಬರೆದಾಗ ಮೈಕ್ ಇರಲಿಲ್ಲ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಹಿಜಾಬ್, ಹಲಾಲ್, ಧ್ವನಿವರ್ಧಕ ಬಳಕೆ ಮುಂತಾದ ವಿವಾದಗಳು ದಿನಕ್ಕೊಂದು ತಲೆದೋರುತ್ತಿವೆ. ಇದೆಲ್ಲ ಚರ್ಚೆ ಮಾಡುತ್ತಾ ಕೂರುವುದು ಸೂಕ್ತವಲ್ಲ. ಎಲ್ಲರಿಗೂ ಕಾನೂನು ಒಂದೇ. ಅದನ್ನು ಪಾಲಿಸುವುದಕ್ಕೆ ಮುಂದಾಗಬೇಕು. ಸುಪ್ರೀಂಕೋರ್ಟ್ ಆದೇಶ ಮೀರದೆ ಅದರಂತೆ ನಡೆದುಕೊಳ್ಳಬೇಕು ಎಂದವರು ತಿಳಿಸಿದರು.