ವಿಧಾನ ಸೌಧ, ಏ 05 (DaijiworldNews/DB): ಓಟ್ ಬ್ಯಾಂಕ್ ರಾಜಕಾರಣವನ್ನು ಕಾಂಗ್ರೆಸ್ ನವರು ಸ್ವಾತಂತ್ರ್ಯ ಬಂದಾಗಿನಿಂದಲೇ ಮುಂದುವರಿಸಿಕೊಂಡು. ಅಧಿಕಾರ ಪಡೆಯಲು ಅದನ್ನೇ ಪಾಲಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಪ್ರತಿ ವಿಚಾರದಲ್ಲಿಯೂ ರಾಜಕಾರಣ ಮಾಡುವುದು ಕಾಂಗ್ರೆಸ್ ನವರಿಗೆ ಹೊಸತೇನಲ್ಲ. ಓಟ್ ಬ್ಯಾಂಕ್ ರಾಜಕೀಯ ಮಾಡಿ ಈ ಹಿಂದೆ ಅಧಿಕಾರ ಪಡೆದರು. ಈಗ ಅದನ್ನೇ ಮುಂದುವರಿಸುತ್ತಿದ್ದಾರೆ. ನಿಯಮದಡಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಆದರೆ ಅವರು ಅದನ್ನೆಲ್ಲ ಮೀರಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಜಾಬ್, ಹಲಾಲ್ ವಿಚಾರಗಳಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವನ್ನು ಇಲ್ಲಿಯವರೆಗೆ ವ್ಯಕ್ತಪಡಿಸಿಲ್ಲ ಎಂದರು.
ಹಿಜಾಬ್, ಹಲಾಲ್ ವಿವಾದ ಎಬ್ಬಿಸಿರುವುದು ಕಾಂಗ್ರೆಸ್. ಈಗ ಹೊಸದಾಗಿ ಧ್ವನಿವರ್ಧಕ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ಅವರು ಯಾವುದೇ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲಎಂದು ಆಪಾದಿಸಿದರು.
ದೇವಾಲಯ, ಮಸೀದಿ ಅಥವಾ ಇತರ ಯಾವುದೇ ಕಡೆಗಳಲ್ಲಾದರೂ ಧ್ವನಿವರ್ಧಕ ಶಬ್ದಕ್ಕೆ ಇಂತಿಷ್ಟೇ ಡೆಸಿಬೆಲ್ ಸದ್ದು ಇರಬೇಕೆಂಬ ನಿಯಮವಿದೆ. ಅದನ್ನು ಪಾಲನೆ ಮಾಡಬೇಕಾದುದು ಎಲ್ಲರ ಕರ್ತವ್ಯ ಎಂದರು.