ಕಾರವಾರ, , ಏ 05 (DaijiworldNews/DB): ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋಗಿರುವುದರಿಂದ ಮುಂದೆ ಸಚಿವ ಸಂಪುಟ ಹಾಗೂ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗಲಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅಂಕೋಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ದೇಶದ್ರೋಹಿಗಳ ವಿರುದ್ದ ಬಾಂಬ್ ಹಿಡಿದೇ ಬಂದಿದ್ದಾರೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬದಲಾವಣೆ ನಿಶ್ಚಿತ. ಕಾಂಗ್ರೆಸ್ ನವರಿಗೆ ಈಗಾಗಲೇ ಎದೆ ಬಡಿತ ಜೋರಾಗಿದೆ ಎಂದರು.
ಸಚಿವ ಸಂಪುಟದಲ್ಲಿಯೂ ಬದಲಾವಣೆಯಾಗಲಿದೆ. ಆಗಲಿರುವ ಬದಲಾವಣೆಗಳು ಏನು ಎಂಬುದನ್ನು ಕಾದು ನೋಡಿ ಎಂದವರು ತಿಳಿಸಿದರು.