ಬೆಳಗಾವಿ, ಏ 05 (DaijiworldNews/HR): ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ಮನೆಯಲ್ಲಿ ಕಳವು ಮಾಡಲು ಬಂದಿದ್ದ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಅನಿಲ್(31) ಎಂದು ಗುರುತಿಸಲಾಗಿದೆ.
ಕಳವು ಮಾಡಲು ಬಂದಿದ್ದ ಆರೋಪಿ ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಆಕೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಕಳ್ಳತನಕ್ಕೆ ನುಗ್ಗಿದ ಮನೆಯಲ್ಲಿ ಬಾಲಕಿಯ ಮಲಗಿದ್ದು, ಆಕೆಯನ್ನೇ ಹೊತ್ತುಕೊಂಡು ಹೋದ ಆರೋಪಿ ನಿಪ್ಪಾಣಿ ತಾಲೂಕಿನ ಗ್ರಾಮವೊಂದಕ್ಕೆ ಕರೆದೊಯ್ದು ಮದ್ಯ ಕುಡಿಸಿ ತಾನೂ ಮದ್ಯ ಸೇವಿಸಿ ಅತ್ಯಾಚಾರವೆಸಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಈ ಬಗ್ಗೆ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.