ನವದೆಹಲಿ, ಏ 05 (DaijiworldNews/HR): ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಂಗಳವಾರ ಮತ್ತೆ 80 ಪೈಸೆಯಷ್ಟು ಹೆಚ್ಚಿಸಿದ್ದು, ಇದು ಕಳೆದ 15 ದಿನಗಳಲ್ಲಿ 13ನೇ ಏರಿಕೆಯಾಗಿದೆ.
ನಾಲ್ಕೂವರೆ ತಿಂಗಳು ಬೆಲೆ ಏರಿಕೆ ಸ್ಥಗಿತಗೊಂಡಿದ್ದು, ಆ ಬಳಿಕ ಕಳೆದ 15 ದಿನಗಳಲ್ಲಿ ಇಂಧನ ದರ ಒಟ್ಟು 9.2 ರೂಪಾಯಿ ಹೆಚ್ಚಳವಾಗಿದೆ.
ಈ ಕುರಿತು ಇಂಧನ ಚಿಲ್ಲರೆ ಮಾರಾಟ ಸಂಸ್ಥೆಗಳ ಅಧಿಸೂಚನೆ ಮಾಹಿತಿ ನೀಡಿದ್ದು, ಇಂದು ದೆಹಲಿಯಲ್ಲಿ ಪೆಟ್ರೋಲ್ ದರ 104.61 ರೂ. ಮತ್ತು ಡಿಸೆಲ್ ಬೆಲೆ 95.87 ರೂ. ಆಗಿದೆ.
ಇನ್ನು ಮುಂಬೈನಲ್ಲಿ ಪೆಟ್ರೋಲ್ ದರ 119.67 ರೂಪಾಯಿಗೆ ಹೆಚ್ಚಿದ್ದು, ಡೀಸೆಲ್ ದರ 103.92 ರೂ. ಆಗಿದೆ.