ಬೆಂಗಳೂರು, ಏ. 04 (DaijiworldNews/SM): ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು, ಆ ಮೂಲಕ ಸರಕಾರ ರಾಜ್ಯದ ಜನರಿಗೆ ಹೊರೆ ನೀಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ರಾಜ್ಯದಲ್ಲಿ ಸರಕಾರ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಜನರ ಮೇಲೆ ಹೆಚ್ಚುವರಿ ಹೊರೆ ವಿಧಿಸಿದಂತಾಗಿದೆ. ಸಮಸ್ಯೆ ಇಲ್ಲ ಎನ್ನುವ ಸರಕಾರ ಯಾವ ಕಾರಣಕ್ಕೆ ಬೆಲೆ ಏರಿಕೆ ಮಾಡಿದೆ ಎನ್ನುವುದು ಸ್ಪಷ್ಟಪಡಿಸಲಿ. ಸರಕಾರ ಕಳ್ಳ ಮಾರ್ಗದಲ್ಲಿ ವಿದ್ಯುತ್ ಮಾರಾಟ ಮಾಡುತ್ತಿದೆಯಾ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಸಮಸ್ಯೆಯೇ ಇಲ್ಲ ಎನ್ನುವವರು ಯಾಕೆ ಬೆಲೆ ಏರಿಕೆ ಮಾಡಿದ್ದಾರೆ. ದರ ಏರಿಕೆ ಮೂಲಕ ಜನತೆಗೆ ಸಂಕಷ್ಟ ನೀಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.