ಜಮ್ಮು, ಏ 04 (DaijiworldNews/MS): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಹಳ್ಳಿಯಲ್ಲಿ ಇದ್ದ ಭಯೋತ್ಪಾದಕರ ಅಡಗುತಾಣವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಸಾಂದರ್ಭಿಕ ಚಿತ್ರ
ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ದಿಗ್ವಾರ್ ಸೆಕ್ಟರ್ನ ನೂರಕೋಟೆ ಗ್ರಾಮದಲ್ಲಿ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಅಡಗುತಾಣ ಪತ್ತೆಯಾಗಿದ್ದು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಗುಂಡುಗಳನ್ನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಎರಡು ಎಕೆ-47 ರೈಫಲ್ಗಳು, ಎರಡು ಪಾಕಿಸ್ತಾನ ನಿರ್ಮಿತ 23 ಬೋರ್ ರೈಫಲ್ಗಳು, ಒಂದು ಚೀನಾ ನಿರ್ಮಿತ ಪಿಸ್ತೂಲ್, 63 ಸುತ್ತುಗಳ ಎಕೆ 47, 20 ಸುತ್ತುಗಳ 23 ಬೋರ್ ರೈಫಲ್ ಮತ್ತು ಎರಡು ಸುತ್ತಿನ ಚೀನಾ ಪಿಸ್ತೂಲ್ ಸೇರಿವೆ.
ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ್ದು , ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.