ಶ್ರೀನಗರ, ಏ 03 (DaijiworldNews/DB): ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ನಾಲ್ವರು ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾನುವಾರ ಬೇಧಿಸಿದ್ದು, ಪ್ರಸ್ತುತ ನಾಲ್ವರನ್ನೂ ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಬಂಧಿತ ಭಯೋತ್ಪಾದಕರನ್ನು ಇರ್ಫಾನ್ ಅಹ್ಮದ್ ಭಟ್, ಸಜಾದ್ ಅಹ್ಮದ್ ಮಿರ್ ಮತ್ತು ಇರ್ಫಾನ್ ಅಹ್ಮದ್ ಜಾನ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಈ ಸಂಘಟನೆಯ ಸಹಚರರು ಒದಗಿಸುತ್ತಿದ್ದರು ಎನ್ನಲಾಗಿದೆ. ಇನ್ನೋರ್ವ ಭಯೋತ್ಪಾದಕ ಇರ್ಫಾನ್ ಅಜೀಜ್ ನನ್ನೂ ಬಂಧಿಸಲಾಗಿದ್ದು, ಆತನಿಂದ ಚೀನೀ ಗ್ರೆನೇಡ್ ನ್ನು ವಶಪಡಿಸಿಕೊಳ್ಳಲಾಗಿದೆ. ಈತ ಪಾಕಿಸ್ತಾನ ಮೂಲದ ಭಯೋತ್ಪಾದಕ ಉಮರ್ ಲಾಲಾನೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಪಾಕ್ ಮೂಲದ ಭಯೋತ್ಪಾದಕರೊಂದಿಗೆ ಸೇರಿ ಹಾಜಿನ್ ಪ್ರದೇಶದಲ್ಲಿ ಭಯೋತ್ಪಾದನೆ ನಡೆಸಲು ಇರ್ಫಾನ್ ಯತ್ನಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.