ನವದೆಹಲಿ, ಏ 03 (DaijiworldNews/HR): ಕಾಶ್ಮೀರಿ ಹಿಂದೂಗಳು ತಮ್ಮ ತಾಯ್ನಾಡಿಗೆ ಮರಳುವ ಸಮಯ ಬಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರ ಸಂಘಸಂಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಕಾಶ್ಮೀರಿ ಪಂಡಿತ ಸಮುದಾಯವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ನವರೇಹ್ ಹೊಸ ವರ್ಷದ ಆರಂಭ ಮತ್ತು 'ಸಂಕಲ್ಪ' ದಿನವಾಗಿದೆ. ತಮ್ಮ ಹೋರಾಟದ ಮನೋಭಾವವನ್ನು ಮುಂದುವರಿಸಲು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಮನವಿ ಮಾಡಿ, ತಮ್ಮ ತಾಯ್ನಾಡಿಗೆ ಮರಳಲು ಬೆಂಬಲ ಸೂಚಿಸಿದರು.
ಇನ್ನು ನಾವು ನಮ್ಮ ದೇಶದಲ್ಲಿರುವಾಗ ನಮ್ಮ ಮನೆಯಿಂದ ಹೊರಗಿರುವ ನೋವನ್ನು ಎದುರಿಸುತ್ತಿದ್ದೇವೆ. ಇದು ದೀರ್ಘಕಾಲ ನಡೆಯುತ್ತಿದೆ. ಗೆಲ್ಲುವ ನಮ್ಮ ಇಚ್ಛೆಯನ್ನು ಕಳೆದುಕೊಂಡು ನಮ್ಮ ಮನೆಗಳಿಗೆ ಹಿಂತಿರುಗುವುದು ಮೊದಲ ಪರಿಹಾರವಾಗಿದೆ ಎಂದಿದ್ದಾರೆ.