ಮುಂಬೈ, ಏ 03 (DaijiworldNews/HR): ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆಸಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಮಸೀದಿಗಳಲ್ಲಿನ ಪ್ರಾರ್ಥನೆಯನ್ನು ವಿರೋಧಿಸಲ್ಲ ಅಥವಾ ಯಾವುದೇ ಧರ್ಮದ ವಿರೋಧಿಯೂ ಅಲ್ಲ ಆದರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತಿದೆ ಎಂದರು.
ಇನ್ನು ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತಕ್ಷಣ ರಾಜ್ಯ ಸರ್ಕಾರ ತೆಗೆಸಬೇಕು. ಇಲ್ಲವಾದಲ್ಲಿ ನಾವು ಮಸೀದಿ ಹೊರಗಡೆ ಧ್ವನಿವರ್ಧಕ ಅಳವಡಿಸಿ ಅಲ್ಲಿ ಹನುಮಾನ್ ಚಾಲೀಸ್ ಶ್ಲೋಕ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.