ನವದೆಹಲಿ, ಏ 03 (DaijiworldNews/HR): ಕಾನ್ಸ್ಟೆಬಲ್ ಜ್ಞಾನ್ ಸಿಂಗ್ ಅವರು ದೆಹಲಿಯ ದಯಾಲ್ಪುರದ ಶೇರ್ಪುರ್ ಚೌಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗೂಳಿಯೊಂದು ದಾಳಿ ನಡೆಸಿರುವ ಘಟನೆ ನಡೆದಿದೆ.
ಗೂಳಿಯು ಕಾನ್ಸ್ಟೆಬಲ್ ನತ್ತ ನುಗ್ಗಿ ಹಿಂದಿನಿಂದ ಗುದ್ದಿ ಗಾಳಿಯಲ್ಲಿ ಮೇಲಕ್ಕೆ ಹಾರಿಸಿದ್ದು, ಅವರು ನೆಲಕ್ಕೆ ಬಿದ್ದ ಬಳಿಕ ಕರ್ತವ್ಯದಲ್ಲಿದ್ದ ಇತರ ಪೊಲೀಸರು ಧಾವಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಘಟನೆಯ ಕುರಿತು ಭಾವ್ ನಗರ ಮೇಯರ್ ಕೀರ್ತಿ ದಾನಿಧರಿಯಾ ಮಾತನಾಡಿ, ಕಳೆದ ವರ್ಷ ಗುಜರಾತಿನ ಭಾವನಗರದಲ್ಲಿ ಬಿಡಾಡಿ ಗೂಳಿಯೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ್ದು, ಬೀದಿಗಿಳಿದ ಹೋರಿಗಳು ಮತ್ತು ಹಸುಗಳನ್ನು ರಸ್ತೆಯಿಂದ ಹೊರದಬ್ಬಲು ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ ಎಂದರು.