ರಾಮೇಶ್ವರಂ, ಏ 03 (DaijiworldNews/HR): ತಮಿಳುನಾಡಿನ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ 12 ಭಾರತೀಯ ಮೀನುಗಾರರು ಮತ್ತು ಒಂದು ದೋಣಿಯನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮೀನುಗಾರರನ್ನು ಶನಿವಾರ ತಡರಾತ್ರಿ ಲಂಕಾ ನೌಕಾಪಡೆ ಬಂಧಿಸಿದ್ದು, ವಿಷಯ ತಿಳಿದ ರಾಮನಾಥಪುರಂ ಸಂಸದ ಕೆ.ನವಾಸ್ ಕಣಿ ಅವರು ವಿದೇಶಾಂಗ ಸಚಿವಾಲಯಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಮಾರ್ಚ್ 29 ರಿಂದ ಶ್ರೀಲಂಕಾ ನೌಕಾಪಡೆಯು ಸಮುದ್ರ ಗಡಿ ಉಲ್ಲಂಘನೆಯ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಬಂಧಿಸುವ ಮೂರನೇ ನಿದರ್ಶನವಾಗಿದೆ.