ಹಾಸನ, ಏ. 02 (DaijiworldNews/SM): ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಹುನ್ನಾರವಾಗುತ್ತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಹರ್ಷಾ ಕೊಲೆ ಪ್ರಕರಣ ವೈಯುಕ್ತಿಕ ದ್ವೇಷದಿಂದ ನಡೆದಿರುವ ಹತ್ಯೆಯಲ್ಲ ಎಂದು ಅವರು ಆರೋಪಿಸಿದ್ದಾರೆ. ಹರ್ಷ ಹಾಗೂ ಕೊಲೆ ಆರೋಪಿಗಾಗಲಿ ಯಾವುದೇ ವೈಷಮ್ಯವಿರಲಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ವೈಯಕ್ತಿಕ ಕಾರಣಗಳಿಂದ ಹರ್ಷನ ಕೊಲೆ ನಡೆದಿಲ್ಲ ಎಂದು ಎನ್ಐಎ ಕೂಡ ದೃಢೀಕರಿಸಿದೆ ಎಂದು ಸಿ.ಟಿ. ರವಿ ಹೇಳಿದರು.
ಯಾರೋ ವೈಯಕ್ತಿಕವಾಗಿ ತೆಗೆದುಕೊಂಡ ತೀರ್ಮಾನ ಇದು ಎಂದು ನನಗೆ ಅನ್ನಿಸುವುದಿಲ್ಲ. ಈ ಹತ್ಯೆ ಹಿಂದೆ ಯಾವುದೋ ಸಂಚು ಅಡಗಿದೆ ಎಂದು ಅವರು ಆರೋಪಿಸಿದ್ದಾರೆ.