ಕೊಲ್ಕತ್ತಾ, ಏ 02 (DaijiworldNews/DB): ಟೇಕಾಫ್ ಆಗುವಾಗ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೋಲ್ಕತ್ತಾಗೆ ಹೊರಟಿದ್ದ ಇಂಡಿಗೋ ವಿಮಾನವನ್ನು ರಾಂಚಿ ವಿಮಾನ ನಿಲ್ದಾಣದಲ್ಲಿ ಶನಿವಾರ ತುರ್ತು ಲ್ಯಾಂಡಿಗ್ ಮಾಡಲಾಯಿತು.
ವಿಮಾನವು 62 ಪ್ರಯಾಣಿಕನ್ನು ಹೊತ್ತು ಕೋಲ್ಕತ್ತಾಗೆ ಪ್ರಯಾಣಿಸಬೇಕಿತ್ತು. ಆದರೆ, ಟೇಕಾಫ್ ಆಗುತ್ತಿದ್ದಂತೆ ಹವಾ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದು, ಅದು ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಹಾಗಾಗಿ ತತ್ ಕ್ಷಣ ವಿಮಾನವನ್ನು ಭೂಸ್ಪರ್ಶ ಮಾಡಲಾಗಿದೆ. ದೋಷ ನಿವಾರಣೆಯಾದ ಬಳಿಕ ತಡವಾಗಿ ವಿಮಾನ ಟೇಕಾಫ್ ಆಗಲಿದೆ ಎಂದು ಇಂಡಿಗೋ ಏರ್ಲೈನ್ಸ್ ಹೇಳಿದೆ.
ವಿಮಾನವನ್ನು ತುರ್ತು ಭೂಸ್ಪರ್ಶ ಗೊಳಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಶರ್ಮಾ ಹೇಳಿದ್ದಾರೆ.