ಚೆನ್ನೈ, ಏ 02 (DaijiworldNews/DB): ಜೀವ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ ಕೇಂದ್ರ ಗೃಹ ಸಚಿವಾಲಯವು ‘ವೈ’ ಕೆಟಗರಿ ಭದ್ರತೆ ನೀಡಿದೆ.
ಈವರೆಗೆ ತಮಿಳುನಾಡು ರಾಜ್ಯ ಪೊಲೀಸರು ಭದ್ರತೆ ಒದಗಿಸುತ್ತಿದ್ದರು. ಇದೀಗ ಪಕ್ಷ ಸಂಘಟನೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಕಾರಣ ಅಣ್ಣಾಮಲೈ ಅವರಿಗೆ ಬೆದರಿಕೆಗಳೂ ಹೆಚ್ಚಾಗಿವೆ. ಹೀಗಾಗಿ ಕೇಂದ್ರವು ‘ವೈ’ ಕೆಟಗರಿ ಭದ್ರತೆ ಒದಗಿಸುತ್ತಿದ್ದು, ಸಿಆರ್ಪಿಎಫ್ ಯೋಧರು ಭದ್ರತೆ ನೀಡಲಿದ್ದಾರೆ.
ಅಣ್ಣಾಮಲೈ ಅವರನ್ನು ಜುಲೈ 2021 ರಲ್ಲಿ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ತಮಿಳುನಾಡಿನ ಬಿಜೆಪಿ ನಾಯಕ ಎಲ್. ಮುರುಗನ್ ಕೇಂದ್ರ ಸಚಿವರಾಗಿ ಆಯ್ಕೆಯಾದ ಬಳಿಕ ತೆರವಾದ ಹುದ್ದೆಗೆ ಅಣ್ಣಾಮಲೈ ನೇಮಕ ನಡೆದಿತ್ತು.