ಮುಂಬೈ, ಏ 02 (DaijiworldNews/DB): ಅಪರಿಚಿತ ವ್ಯಕ್ತಿಗಳು ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ತನ್ನ ಹೆಸರಿನ ಮೇಲೆ ಸಾಲ ಪಡೆದಿ ವಂಚನೆ ಎಸಗಿದ್ದಾರೆ ಎಂದು ನಟ ರಾಜ್ಕುಮಾರ್ ರಾವ್ ಹೇಳಿದ್ದಾರೆ.
ನನ್ನ ಹೆಸರಿನಲ್ಲಿ 2,500 ರೂ. ಮೊತ್ತದ ಸಾಲವನ್ನು ಅಪರಿಚಿತ ವ್ಯಕ್ತಿಗಳು ಪಡೆದುಕೊಂಡಿದ್ದಾರೆ. ಇದಕ್ಕಾಗಿ ನನ್ನ ಪಾನ್ ಕಾರ್ಡ್ ನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ಪರಿಣಾಮ ತನ್ನ ಕ್ರೆಡಿಟ್ ಸ್ಕೋರ್ ಮೇಲೆ ಬಿದ್ದಿದೆ. ಕ್ರೆಡಿಟ್ ಇನ್ಫಾರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ಅಧಿಕಾರಿಗಳು ಈ ವಿಚಾರವನ್ನು ಪರಿಶೀಲನೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಅಲ್ಲದೆ, ಈ ವಂಚನೆ ಬಗ್ಗೆ ಸಿಬಿಲ್ ಗೆ ಗಮನ ಸೆಳೆಯಲು ಟ್ವೀಟ್ ಕೂಡಾ ಮಾಡಿದ್ದಾರೆ. ಸಿಬಿಲ್ ನ ಅಧಿಕೃತ ಟ್ವಿಟರ್ ಖಾತೆಯಿಂದ ನಟ ರಾಜ್ ಕುಮಾರ್ ರಾವ್ ಅವರಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.