ಬೆಂಗಳೂರು, ಏ 02 (DaijiworldNews/DB): ರಾಜ್ಯದಲ್ಲಿ ಪ್ರಾಣಿ ವಧೆ ಮಾಡಬೇಕಾದರೆ ಸ್ಟನ್ನಿಂಗ್ ಕಡ್ಡಾಯ ಎಂಬ ಆದೇಶ ಹೊರಡಿಸಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಸ್ಪಷ್ಟನೆ ನೀಡಿದ್ದಾರೆ.
ಹಲಾಲ್ ಕಟ್, ಜಟ್ಕಾ ಕಟ್ ವಿವಾದದ ಬೆನ್ನಲ್ಲೇ ಪ್ರಾಣಿ ವಧೆಗೆ ಪಶು ಸಂಗೋಪನಾ ಇಲಾಖೆಯು ಸ್ಟನ್ನಿಂಗ್ ಕಡ್ಡಾಯಗೊಳಿಸಿ ಆದೇಶಿಸಿದೆ ಎಂಬ ಸುದ್ದಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಇಲಾಖೆಯಿಂದ ಅಂತಹ ಯಾವುದೇ ಆದೇಶ ಹೊರ ಬಿದ್ದಿಲ್ಲ. ಆದರೆ ಹಲಾಲ್ ಕಟ್ ಮಾಡಬಾರದೆಂದು ಪತ್ರ ಬರೆದಿದ್ದಾರೆ. ಇದನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಯೋಜಿಸಲಾಗುವುದು ಎಂದರು.
ಹಿಂಸೆ ನೀಡದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವುದನ್ನು ಸ್ಟನ್ನಿಂಗ್ ಕಟ್ ಎನ್ನುತ್ತಾರೆ. ಪ್ರಾಣಿಗಳ ತಲೆಗೆ ಸ್ಟನ್ನಿಂಗ್ ಸಿಸ್ಟಮ್ ನಲ್ಲಿ ಜೋರಾಗಿ ಹೊಡೆದಾಗ ತೀವ್ರ ಪೆಟ್ಟಿನಿಂದ ಅವುಗಳ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪುತ್ತವೆ. ಇಂತಹ ಸಂದರ್ಭದಲ್ಲಿ ತತ್ ಕ್ಷಣ ಸಾಯುವುದರಿಂದ ಹಿಂಸೆ, ನರಳಾಟ ಇರುವುದಿಲ್ಲ.