ಬೆಂಗಳೂರು, ಏ 02 (DaijiworldNews/DB): ರಾಜ್ಯದಲ್ಲಿ ತಲೆದೋರಿರುವ ಹಲಾಲ್ ಕಟ್ ಜಟ್ಕಾ ಕಟ್ ವಿವಾದದ ಬೆನ್ನಲ್ಲೇ ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೊದಲಿಗೆ ಪ್ರಾಣಿ ಹಿಂಸೆ ತಡೆಗಟ್ಟುವುದರತ್ತ ಗಮನ ನೀಡಬೇಕು. ಆಹಾರಕ್ಕಾಗಿ ಪ್ರಾಣಿಗಳನ್ನು ವಧೆ ಮಾಡುವಾಗ ಅವುಗಳಿಗೆ ಯಾವುದೇ ಹಿಂಸೆ ಆಗದಂತೆ ಜಾಗೃತೆ ವಹಿಸಬೇಕು. ಪ್ರಾಣಿ ವಧೆಗೂ ಮುನ್ನ ಸ್ಟನ್ನಿಂಗ್ ಮಾಡಬೇಕು. ಸ್ಟನ್ನಿಂಗ್ ಸಿಸ್ಟಮ್ ಇದ್ದಲ್ಲಿ ಮಾತ್ರ ವಧೆಗೆ ಅವಕಾಶವಿರುತ್ತದೆ. ವಧೆಗೆ ಮುನ್ನ ನೋವು ಗೊತ್ತಾಗದಿರಲು ಹತ್ಯೆಗೆ ಮುನ್ನ ಪ್ರಜ್ಞೆ ತಪ್ಪಿಸಬೇಕು ಎಂದು ಸೂಚನೆ ನೀಡಲಾಗಿದೆ.
ಪ್ರಾಣಿ ವಧೆಗೆ ಮುನ್ನ ಈ ಆದೇಶವನ್ನು ಯಾವುದೇ ಅಂಗಡಿಗಳಲ್ಲಿ ಪಾಲಿಸಲಾಗುತ್ತಿಲ್ಲ ಎಂಬ ಬಗ್ಗೆ ಇಲಾಖೆಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.