ಶ್ರೀನಗರ, ಏ 1 (DaijiworldNews/HR): ಜೈಶೆ-ಮೊಹಮ್ಮದ್ (ಜೆಇಎಂ) ಉಗ್ರರ ಸಂಚನ್ನು ಪೊಲೀಸರು ವಿಫಲಗೊಳಿಸಿ ಜೆಇಎಂನ ಮೂವರು ಸಹಚರರನ್ನು ಬಂಧಿಸಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಬಂಧಿತರನ್ನು ಪುಲ್ವಾಮದ ಜಂದ್ವಾಲ್ ಪ್ರದೇಶದ ನಿವಾಸಿ ಒವೈಸ್ ಅಲ್ತಾಫ್, ಅಖಿಬ್ ಮನ್ಸೂರ್, ಕರಿಮಬಾದ್ನ ವಸೀಂ ಅಹ್ಮದ್ ಪಂಡಿತ್ ಎಮ್ದು ಗುರುತಿಸಲಾಗಿದೆ.
ಭಾರತೀಯ ಸೇನೆ ಹಾಗೂ ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದು, ಈ ಮೂವರು ಜೆಇಎಂ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಇನ್ನು ಬಂಧಿತ ಉಗ್ರರಿಂದ ಎಕೆ-47 ರೈಫಲ್, ಮೂರು ಮ್ಯಾಗಜೈನ್, 69 ಬಂದೂಕಿನ ಗುಂಡುಗಳು, ಗ್ರೆನೆಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದರು.