ಹೈದರಬಾದ್, ಏ 01 (DaijiworldNews/MS): ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರು ಕಚೇರಿಯಿಂದ ಮುಂಚಿತವಾಗಿ ಹೊರಡಲು ತೆಲಂಗಾಣ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ.
ಮುಸ್ಲಿಂ ಉದ್ಯೋಗಿಗಳಿಗೆ ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ಹೊರಹೋಗಲು ಅನುಮತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮುಸ್ಲಿಂ ಸರ್ಕಾರಿ ಸೇವೆಯಲ್ಲಿರುವ/ಗುತ್ತಿಗೆ/ಔಟ್-ಸೋರ್ಸಿಂಗ್/ಬೋರ್ಡ್ಗಳು/ ಸಾರ್ವಜನಿಕ ವಲಯದ ನೌಕರರು, ಕಚೇರಿ, ಶಾಲೆಯಿಂದ ಪವಿತ್ರ ರಂಜಾನ್ ತಿಂಗಳಿನಲ್ಲಿ 2022ರ ಏಪ್ರಿಲ್ 2 ರಿಂದ ಮೇ 2 ರವರೆಗೆ ಸಂಜೆ 4 ಗಂಟೆಗೆ ಹೊರಡಲು ಸರ್ಕಾರ ಅನುಮತಿ ನೀಡುತ್ತದೆ.
ಈ ಅವಧಿಯಲ್ಲಿ ಸೇವೆಗಳ ಅಗತ್ಯತೆಗಳ ಕಾರಣದಿಂದಾಗಿ ಅವರ ಉಪಸ್ಥಿತಿಯು ಅಗತ್ಯವಿರುವಾಗ ಹೊರತುಪಡಿಸಿ, ಅಗತ್ಯ ಆಚರಣೆಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ