ಬೆಂಗಳೂರು, ಮಾ. 31 (DaijiworldNews/DB): ತಮ್ಮ ಗಂಡಸ್ತನದ ವಿಚಾರವಾಗಿ ಕುಮಾರಸ್ವಾಮಿ ಆಡಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರತಿಕ್ರಿಯೆಗೆ ಉತ್ತರಿಸಿದ ಸಿಎಂ, ಕುಮಾರಸ್ವಾಮಿ ಹೇಳಿದಕ್ಕೆಲ್ಲಾ ಉತ್ತರ ಕೊಡುತ್ತಾ ಕೂರಲು ಸಮಯವಿಲ್ಲ. ಅವರು ಹೇಳಿರುವ ರೀತಿಯಲ್ಲಿ ಗಂಡಸ್ತನದ ಪ್ರಶ್ನೆಯೂ ಬರುವುದಿಲ್ಲ ಎಂದರು.
ಹಿಜಾಬ್ ವಿಚಾರಕ್ಕೆ ಸರ್ಕಾರ ಉತ್ತಮ ಕಾನೂನು ಸುವ್ಯವಸ್ಥೆಯನ್ನು ನಿರೂಪಿಸಿದೆ. ಹಲಾಲ್ ಕಟ್ ವಿಚಾರದಲ್ಲಿಯೇ ಅದೇ ರೀತಿ ನಿರ್ವಹಣೆ ಮಾಡಲಾಗುವುದು. ಸರ್ಕಾರ ಎಲ್ಲಾ ವಿಚಾರಗಳನ್ನು ಸಮರ್ಥವಾಗಿಯೇ ಎದುರಿಸಿ ಪರಿಹರಿಸಲಿದೆ ಎಂದು ತಿಳಿಸಿದರು.