ಪಾಟ್ನಾ, ಮಾ 30 (DaijiworldNews/HR): ಮದ್ಯಪಾನ ಮಾಡುವವರು ಭಾರತೀಯರಲ್ಲ ಅವರು ಮಹಾಪಾಪಿಗಳು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮದ್ಯಪಾನ ನಿಷೇಧದ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರು ಕೂಡ ಮದ್ಯಪಾನ ವಿರೋಧಿಗಳಾಗಿದದ್ದವರು. ಅವರ ಮಾತು ಪಾಲಿಸದವರು ಮತ್ತು ಮದ್ಯಪಾನ ಮಾಡುವವರನ್ನು ಭಾರತೀಯರು ಎಂದು ನಾನು ಪರಿಗಣಿಸುವುದಿಲ್ಲ ಎಂದರು.
ಇನ್ನು ಮದ್ಯಪಾನದಿಂದಾಗುವ ಹಾನಿಯ ಕುರಿತು ಅಂದು ಗಾಂಧೀಜಿಯವರು ಭಾಷಣ ಮಾಡಿದ್ದರು. ಮದ್ಯಪಾನ ಮಾಡುವುದು ತಪ್ಪು ಎನ್ನುವುದು ಜನರಿಗೆ ತಿಳಿದಿದ್ದರೂ, ಮತ್ತೆ ಅದನ್ನು ಮುಂದುವರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.