ಛತ್ತೀಸ್ಗಢ , ಮಾ 31 (DaijiworldNews/MS): ಅವಿವಾಹಿತ ಮಗಳು ತನ್ನ ಪೋಷಕರಿಂದ ಮದುವೆಯ ವೆಚ್ಚವನ್ನು ಪಡೆಯಬಹುದು ಎಂದು ಛತ್ತೀಸ್ಗಢ ಹೈಕೋರ್ಟ್ ಹೇಳಿದೆ.
ಮದುವೆಯಾಗದ ಮಗಳು ಮದುವೆಗಾಗಿ ₹ 25 ಲಕ್ಷ ಕೋರಿದ್ದ ಅರ್ಜಿಯನ್ನು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಅದು ಆಲಿಸಿ ಈ ತೀರ್ಪು ನೀಡಿದೆ.
ತನ್ನ ತಂದೆ ನಿವೃತ್ತಿಯ ನಂತರ 75 ಲಕ್ಷ ರೂಪಾಯಿ ಪಡೆದಿದ್ದಾರೆ . ಅದರಲ್ಲಿ 25 ಲಕ್ಷ ರೂಪಾಯಿ ಇನ್ನೂ ಸರ್ಕಾರದಿಂದ ಬಾಕಿ ಉಳಿದಿದೆ ಎಂದು ಮಗಳು ಹೇಳಿಕೊಂಡಿದ್ದು, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆಯಡಿಯಲ್ಲಿ ಅವಿವಾಹಿತ ಮಗಳು ತನ್ನ ಮದುವೆಗೆ ಸಂಬಂಧಿಸಿದ ವೆಚ್ಚವನ್ನು ಪೋಷಕರಿಂದ ಪಡೆಯಬಹುದು. ಭಾರತೀಯ ಸಮಾಜದಲ್ಲಿ, ಸಾಮಾನ್ಯವಾಗಿ ಮದುವೆಯ ಪೂರ್ವ ಮತ್ತು ಮದುವೆಯ ಸಮಯದಲ್ಲಿ ವೆಚ್ಚಗಳನ್ನು ಮಾಡಬೇಕಾಗುತ್ತದೆ," ಎಂದು ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ಸಂಜಯ್ ಎಸ್ ಅಗರವಾಲ್ ಅವರ ವಿಭಾಗೀಯ ಪೀಠವು ಹೈಕೋರ್ಟ್ ಹೇಳಿದೆ.
ನಿರ್ವಹಣಾ ಮೊತ್ತವು ಮದುವೆಯ ವೆಚ್ಚವನ್ನು ಒಳಗೊಂಡಿರುತ್ತದೆ ಎಂದು ವಾದಿಸಿ ತನ್ನ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಅರ್ಜಿದಾರರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.