ನವದೆಹಲಿ, ಮಾ 31 (DaijiworldNews/MS): ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಇಂದು (31 ಮಾರ್ಚ್ 2022) ಕೊನೆಯ ದಿನಾಂಕವಾಗಿದೆ.ಏ. 1 ರಿಂದ ಪ್ಯಾನ್ ಜತೆ ಆಧಾರ್ ಲಿಂಕ್ ಆಗದಿದ್ದರೆ ಅಂತಹ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ. ಇದನ್ನು ಮತ್ತೆ ಸಕ್ರಿಯ ಮಾಡಲು ದಂಡವನ್ನು ಪಾವತಿಸಬೇಕಾಗುತ್ತದೆ.
ಪಾನ್ ಕಾರ್ಡ್ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಹಿಂದಿನ ಗಡುವು 30 ನೇ ಸೆಪ್ಟೆಂಬರ್ 2021 ಆಗಿತ್ತು. ಆದಾಗ್ಯೂ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಲಿಂಕ್ ಮಾಡಲು ಮಾರ್ಚ್ 31, 2022ರವರೆಗೆ ಗಡುವನ್ನು ವಿಸ್ತರಿಸಿತ್ತು.
ಏ.1 ರಿಂದ ಜೂ. 1 ರ ಒಳಗೆ ಆಧಾರ್ ಲಿಂಗ್ ಮಾಡುವವರುಗೆ ರೂ. 500 ದಂಡವಿದ್ದರೆ ಜೂ. ಅನಂತರ 1000 ರೂ. ದಂಡ ವಿಧಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ತಿಳಿಸಿದೆ