ಪುಣೆ, ಮಾ 30 (DaijiworldNews/DB): ಭಾರತೀಯ ವಾಯುಪಡೆಗೆ ಸೇರಿದ ಸುಖೋಯ್-30 ಎಂಕೆಐ ಯುದ್ಧ ವಿಮಾನದ ಟಯರ್ ಸ್ಪೋಟಗೊಂಡ ಘಟನೆ ಪುಣೆ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದಿದೆ.
ಪುಣೆ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ರನ್ ವೇಯಲ್ಲಿ ಈ ಘಟನೆ ನಡೆದಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ರನ್ ವೇಯಲ್ಲಿ ವಿಮಾನ ಬಾಕಿಯಾದ ಕಾರಣ ಇತರ ವಿಮಾನಗಳ ಹಾರಾಟಕ್ಕೆ ಅಡ್ಡಿ ಉಂಟಾಗಿತ್ತು. ಬಳಿಕ ಭಾರತೀಯ ವಾಯುಪಡೆಯ ಸಿಬಂದಿ ತತ್ ಕ್ಷಣ ಆಗಮಿಸಿ ವಿಮಾನವನ್ನು ಪರಿಶೀಲನೆ ನಡೆಸಿದರು. ನಂತರ ರನ್ವೇಯಲ್ಲಿ ಸಿಲುಕಿದ್ದ ವಿಮಾನವನ್ನು ಬದಿಗೆ ಸರಿಸಿ ಇತರ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಡಲಾಯಿತು ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.