ಮೈಸೂರು, ಮಾ 30 (DaijiworldNews/MS): ಮುಖ್ಯಮಂತ್ರಿ ಸ್ಥಾನದಿಂದ ಸದ್ಯದಲ್ಲಿಯೇ ಬಸವರಾಜ ಬೊಮ್ಮಾಯಿಯವರು ಕೆಳಗಿಳಿಯುತ್ತಾರೆ ಎಂಬುವುದು ಕೇವಲ ಊಹಾಪೋಹಗಳಷ್ಟೇ. ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರವೂ ನಮಗೆ ಕೊಟ್ಟ ಭರವಸೆಯನ್ನು ಈಡೇರಿಸಿದೆ ಎಂದು ಹೇಳಿದರು.
ಮುಂದಿನ ವಿಧಾನಸಭೆಯ ಚುನಾವಣೆಯ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, ನಾವು ಖಂಡಿತವಾಗಿ 140 ಸ್ಥಾನ ಗೆಲುತ್ತೇವೆ. ಮುಂದಿನ ತಿಂಗಳ ಆರಂಭದಿಂದಲೇ ಮೂರು ನಾಲ್ಕು ತಂಡಗಳ ಮೂಲಕ ರಾಜ್ಯ ಪ್ರವಾಸ ಮಾಡುತ್ತೇವೆ ಎಂದರು.
ಅವಧಿಗೂ ಮುನ್ನ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್ ವೈ, ಅವಧಿ ಪೂರ್ವ ಚುನಾವಣೆಯಾಗುವ ಲಕ್ಷಣ ಸದ್ಯಕ್ಕಿಲ್ಲ. ಆದರೆ, ಅಮಿತ್ ಶಾ ರಾಜ್ಯ ಭೇಟಿ ನಂತರ ಆ ರೀತಿಯ ಇದ್ದರೆ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.