ಬೆಂಗಳೂರು, ಮಾ. 29 (DaijiworldNews/SM): ರಾಜ್ಯದಲ್ಲಿ ಅವಧಿ ಪೂರ್ಣ ಚುನಾವಣೆ ಬಂದಲ್ಲಿ ಕಾಂಗ್ರೆಸ್ ಎದುರಿಸಲು ಸಿದ್ಧವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಅವಧಿ ಪೂರ್ಣ ಚುನಾವಣೆಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಚುನಾವಣಾ ಆಯೋಗ ಅವಧಿ ಪೂರ್ಣ ಚುನಾವಣೆ ನಡೆಸಲಿ. ಚುನಾವಣೆ ಎದುರಿಸಲು ನಾವು ಎಲ್ಲಾ ರೀತಿಯಲ್ಲೂ ಸಜ್ಜು ಎಂದು ಡಿಕೆಶಿ ತಿಳಿಸಿದ್ದಾರೆ.
ನಾಳೆ ಬೇಕಾದರೆ ಚುನಾವಣಾ ದಿನಾಂಕ ಘೋಷಿಸಲಿ. ನವಂಬರ್ ನಲ್ಲಿ ಚುನಾವಣೆ ನಡೆಸಲಿ. ಮುಂದಿನ ಮಾರ್ಚ್ ತಿಂಗಳಲ್ಲಿ ಚುನಾವಣೆ ನಡೆಯಲಿ ನಮ್ಮ ಪಕ್ಷ ಸಮರ್ಥವಾಗಿ ಎದುರಿಸಲು ಸಿದ್ಧ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.