ಬೆಂಗಳೂರು, ಮಾ 29 (DaijiworldNews/DB): ಮುಸ್ಲಿಂ ವರ್ತಕರ ವ್ಯಾಪಾರಕ್ಕೆ ನಿಷೇಧ ಒತ್ತಡ ಹೇರುವ ಮತ್ತು ಪ್ರಚೋದನೆ ನೀಡುವವರನ್ನು ತತ್ ಕ್ಷಣ ಬಂಧಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪೊಲೀಸರನ್ನು ಒತ್ತಾಯಿಸಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ವ್ಯಾಪಾರ ಮಾಡಲು ಪ್ರತಿಯೊಬ್ಬರಿಗೂ ಹಕ್ಕು ಮತ್ತು ಅವಕಾಶವಿದೆ. ಅದನ್ನು ನಿರ್ಬಂಧಿಸುವುದು ಸರಿಯಲ್ಲ. ನಿರ್ಬಂಧಕ್ಕೆ ಒತ್ತಡ ಹೇರುವವರು ಯಾರೇ ಆದರೂ ಅವರನ್ನು ಬಂಧಿಸಬೇಕು. ಅದು ಶಾಸಕ, ಸಚಿವ ಯಾರೇ ಆಗಲಿ. ಸ್ವಾಸ್ಥ್ಯ ಕದಡುವವರನ್ನು ಸುಮ್ಮನೆ ಬಿಟ್ಟರೆ ದೇಶ ಒಡೆಯುವ ಕೆಲಸಕ್ಕೆ ಅಂತಹವರು ಕೈ ಹಾಕುತ್ತಾರೆ ಎಂದರು.
ಇಂತಹ ಪ್ರಚೋದನೆ ನೀಡುವವರು ಯುವಕರ ಭವಿಷ್ಯ ರೂಪಿಸುವುದಿಲ್ಲ. ಅಂತಹವರ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಇದೇ ವೇಳೆ ಯುವಕರಿಗೆ ಅವರು ಸಲಹೆ ಮಾಡಿದರು.