ನವದೆಹಲಿ, ಮಾ 29 (DaijiworldNews/DB): ಬಿಜೆಪಿ ವಿರುದ್ಧ ಏಕತೆ ಸಾರುವಂತೆ ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ.
ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯೋಗ್ಯ ಸರ್ಕಾರ ದೇಶಕ್ಕೆ ಅಗತ್ಯವಿದೆ. ಇದಕ್ಕಾಗಿ ಬಿಜೆಪಿಯೇತರರು ಒಟ್ಟಾಗಬೇಕು. ಪ್ರಗತಿಪರ ಶಕ್ತಿಗಳು ಏಕತೆ ಸಾರುವುದು ಇಂದಿನ ಅವಶ್ಯವಾಗಿದೆ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.
ಅಲ್ಲದೆ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲು ಅವರು ಬಿಜೆಪಿಯೇತರ ಸಿಎಂ ಗಳ ಸಭೆ ಕರೆದಿದ್ದಾರೆ.