ಸಾಗರ, ಮಾ 29 (DaijiworldNews/HR): ಸಾಗರ ತಾಲೂಕಿನ ಮಾಸೂರು ಸಮೀಪದ ಮೆಳವರಿಗೆಯಲ್ಲಿ ಯುವಕನೊಬ್ಬ ತನ್ನ ಮನೆಯಲ್ಲಿ ಸಹೋದರರೆಲ್ಲ ಉತ್ತಮವಾದ ಉದ್ಯೋಗದಲ್ಲಿರುವಾಗ ತನೆಗ ಮಾತ್ರ ಕೆಲಸ ಸಿಕ್ಕಿಲ್ಲ ಎಂದು ಮನನೊಂದು ನೇಣಿಗೆ ಶರಣಾದ ಘಟನೆ ನಡೆದಿದೆ.
ಮೃತ ಯುವಕನನ್ನು ಮೆಳವರಿಗೆಯ ರಾಮಪ್ಪನವರ ಪುತ್ರ ರವಿ(30) ಎಂದು ಗುರುತಿಸಲಾಗಿದೆ.
ಪದವಿ ಮುಗಿಸಿಕೊಂಡಿದ್ದ ರವಿಗೆ ಸರಿಯಾದ ಉದ್ಯೋಗ ಸಿಗದೆ ಇದ್ದುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ನೇಣಿ ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821