ರಾಯಚೂರು, ಮಾ 29 (DaijiworldNews/DB): ಬಾಲಕಿಯೊಬ್ಬಳು ಮೇವು ತರಲು ಹೋಗಿದ್ದ ವೇಳೆ ಹಾವು ಕಡಿತಕ್ಕೊಳಗಾಗಿ ಮೃತಪಟ್ಟ ಘಟನೆ ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತ ಬಾಲಕಿಯನನು ಗೀತಾಂಜಲಿ (15) ಎಂದು ಗುರುತಿಸಲಾಗಿದೆ. ಬಾಲಕಿ ಮಂಗಳವಾರ ಬೆಳಗ್ಗೆ ಮೇವು ತರಲು ಹೋಗಿದ್ದಳು. ಈ ವೇಳೆ ಬಣವೆಯಲ್ಲಿ ಹಾವು ಇರುವುದು ಆಕೆಗೆ ತಿಳಿದಿರಲಿಲ್ಲ. ಹಾವು ಕಡಿತಗೊಂಡದ್ದನ್ನು ಮುಳ್ಳು ಚುಚ್ಚಿರಬಹುದು ಎಂಬುದಾಗಿ ನಿರ್ಲಕ್ಷ್ಯ ವಹಿಸಿದ್ದಾಳೆ. ಆದರೆ ಮನೆಗೆ ಬಂದ ಬಳಿಕ ಅನಾರೋಗ್ಯ ಎಂಬುದಾಗಿ ಮಲಗಿದ್ದು, ಬಳಿಕ ಬಾಯಿಯಲ್ಲಿ ನೊರೆ ಬಂದಿದೆ. ಇದರಿಂದ ಮನೆಯವರಿಗೆ ವಿಷಯ ಗೊತ್ತಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.
ರಿಮ್ಸ್ ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.